September 22, 2021

Vijayanews

#1 digital newspaper

ಹರಪನಹಳ್ಳಿ: ತಾ.ಪಂ., ಜಿ.ಪಂ. ಸದಸ್ಯ ಸ್ಥಾನಕ್ಕೆ ಮೀಸಲಾತಿ ಪ್ರಕಟ

ಹರಪನಹಳ್ಳಿ: ಜಿ.ಪಂ., ತಾ.ಪಂ. ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟ
ಹರಪನಹಳ್ಳಿ: ಕ್ಷೇತ್ರ ಪುನರ್ವಿಂಗಡೆಯ ನಂತರ ಅಸ್ತಿತ್ವಕ್ಕೆ ಬಂದಿರುವ ತಾಲ್ಲೂಕಿನ 21 ತಾಲ್ಲೂಕು ಪಂಚಾಯ್ತಿ ಹಾಗೂ 8 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ಮೀಸಲು ನಿಗದಿಪಡಿಸಿ ರಾಜ್ಯಚುನಾವಣಾ ಆಯೋಗ ಜುಲೈ 1ರಂದು ಕರಡು ಅಧಿಸೂಚನೆ ಹೊರಡಿಸಿದೆ.
ನಿರ್ಗಮಿತಿ ಆಡಳಿತ ಮಂಡಳಿಗೆ 2016ರಲ್ಲಿ ನಡೆದ ಚುನಾವಣೆಗೆ 26ಸದಸ್ಯ ಸ್ಥಾನವನ್ನು ಒಳಗೊಂಡಿದ್ದ ತಾಲ್ಲೂಕು ಪಂಚಾಯ್ತಿ ಆಡಳಿತ ಮಂಡಳಿ, ಕ್ಷೇತ್ರ ಪುನರ್ವಿಂಗಡನೆಯ ನಂತರ ಈ ಬಾರೀ 5ಸದಸ್ಯ ಸ್ಥಾನವನ್ನು ಕಳೆದುಕೊಳ್ಳುವ ಮೂಲಕ 21ಸದಸ್ಯ ಬಲವನ್ನು ಹೊಂದಿದೆ.
ತಾ.ಪಂ. ಕ್ಷೇತ್ರಗಳ ಮೀಸಲಾತಿ:
ನಿಚ್ಚವ್ವನಹಳ್ಳಿ- ಅನುಸೂಚಿತ ಪಂಗಡ(ಮಹಿಳೆ),
ತೌಡೂರು- ಅನುಸೂಚಿತ ಜಾತಿ
ಅರಸೀಕೆರೆ- ಅನುಸೂಚಿತ ಪಂಗಡ
ಮತ್ತಿಹಳ್ಳಿ- ಸಾಮಾನ್ಯ,
ಚಿಗಟೇರಿ- ಸಾಮಾನ್ಯ(ಮಹಿಳೆ)
ಮುತ್ತಿಗಿ- ಸಾಮಾನ್ಯ(ಮಹಿಳೆ)
ಹಗರಿಗಜಾಪುರ_ ಸಾಮಾನ್ಯ
ನಂದಿಬೇವೂರು- ಸಾಮಾನ್ಯ(ಮಹಿಳೆ)
ಮಾಡಲಗೇರಿ- ಅನುಸೂಚಿತ ಜಾತಿ(ಮಹಿಳೆ)
ಕೆ.ಕಲ್ಲಹಳ್ಳಿ- ಅನುಸೂಚಿತ ಜಾತಿ
ಮಾಚಿಹಳ್ಳಿ- ಅನುಸೂಚಿತ ಪಂಗಡ(ಮಹಿಳೆ)
ಹಾರಕನಾಳು- ಅನುಸೂಚಿತ ಜಾತಿ
ತೆಲಿಗಿ- ಸಾಮಾನ್ಯ
ಸೇವಾನಗರ- ಸಾಮಾನ್ಯ
ಕಡತಿ- ಸಾಮಾನ್ಯ
ಕುಂಚೂರು- ಸಾಮಾನ್ಯ(ಮಹಿಳೆ)
ಹಲುವಾಗಲು- ಸಾಮಾನ್ಯ(ಮಹಿಳೆ)
ಉಚ್ಚಂಗಿದುರ್ಗ- ಅನುಸೂಚಿತ ಜಾತಿ(ಮಹಿಳೆ)
ಅಣಜಿಗೆರೆ- ಅನುಸೂಚಿತ ಜಾತಿ(ಮಹಿಳೆ)
ಕಂಚಿಕೆರೆ- ಸಾಮಾನ್(ಮಹಿಳೆ)
ಹಿರೇಮೇಗಳಗೇರಿ- ಅನುಸೂಚಿತ ಪಂಗಡ
ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಮೀಸಲಾತಿ:
ಕಳೆದ 2016ರಲ್ಲಿ ದಾವಣಗೆರೆ ಜಿಲ್ಲಾ ಪಂಚಾಯ್ತಿಗೆ ಒಳಪಟ್ಟಿದ್ದ ಹರಪನಹಳ್ಳಿ ತಾಲ್ಲೂಕಿನಲ್ಲಿ ಅರಸೀಕೆರೆ, ಚಿಗಟೇರಿ, ಉಚ್ಚಂಗಿದುರ್ಗ, ನೀಲಗುಂದ, ಕಂಚಿಕೆರೆ, ತೆಲಿಗಿ ಹಾಗೂ ಹಲುವಾಗಲು ಸೇರಿದಂತೆ ಒಟ್ಟು 7ಸದಸ್ಯ ಸ್ಥಾನಗಳನ್ನು ಹೊಂದಿತ್ತು. ಆದರೆ, ಈ ಬಾರೀ ನೂತನ ವಿಜಯನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಒಳಗೊಂಡಿದ್ದು, ಒಂದು ಸದಸ್ಯ ಸ್ಥಾನವನ್ನು ಹೆಚ್ಚುವರಿ ಪಡೆದುಕೊಂಡಿದೆ. ಜತೆಗೆ, ಕಳೆದ ನಿರ್ಗಮಿತ ಆಡಳಿತ ಮಂಡಳಿಯಲ್ಲಿ ಸದಸ್ಯ ಸ್ಥಾನವನ್ನು ಹೊಂದಿದ್ದ, ನೀಲಗುಂದ, ಕಂಚಿಕೆರೆ ಸದಸ್ಯ ಸ್ಥಾನವನ್ನು ಕಳೆದುಕೊಂಡಿದ್ದು, ಬದಲಾಗಿ, ಮಾಚಿಹಳ್ಳಿ, ಮಾಡಲಗೇರಿ ಹಾಗೂ ಹಿರೇಮೇಗಳಗೇರಿ ನೂತನ ಕ್ಷೇತ್ರಗಳಾಗಿ ಅಸ್ತಿತ್ವಪಡೆದುಕೊಂಡಿವೆ. ಹೀಗಾಗಿ, ತಾಲ್ಲೂಕಿನಲ್ಲಿ 8ಸದಸ್ಯ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿ, ರಾಜ್ಯ ಚುನಾವಣಾ ಆಯೋಗ ಕರಡು ಅಧಿಸೂಚನೆ ಹೊರಡಿಸಿದೆ.
ಅರಸೀಕೆರೆ- ಅನುಸೂಚಿತ ಪಂಗಡ(ಮಹಿಳೆ)
ಚಿಗಟೇರಿ- ಸಾಮಾನ್ಯ,
ಮಾಡಲಗೇರಿ- ಅನುಸೂಚಿತ ಜಾತ(ಮಹಿಳೆ)
ಮಾಚಿಹಳ್ಳಿ- ಸಾಮಾನ್ಯ(ಮಹಿಳೆ)
ತೆಲಿಗಿ- ಅನುಸೂಚಿತ ಜಾತಿ
ಹಲುವಾಗಲು- ಸಾಮಾನ್ಯ
ಉಚ್ಚಂಗಿದುರ್ಗ- ಸಾಮಾನ್ಯ(ಮಹಿಳೆ)
ಹಿರೇಮೇಗಳಗೇರಿ- ಸಾಮಾನ್ಯ