December 8, 2021

Vijayanews

#1 digital newspaper

ಸಂಸದ ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ

ಸಂಸದ ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡಲು ಒತ್ತಾಯ
ಹರಪನಹಳ್ಳಿ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಎ. ನಾರಾಯಣಸ್ವಾಮಿ ಅವರಿಗೆ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಕಣವಿಹಳ್ಳಿ ಮಂಜುನಾಥ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿ ಮಾತನಾಡಿದ ಅವರು, ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ನಾರಾಯಣಸ್ವಾಮಿ ಅವರು ಸಮಸ್ತ ದಲಿತ(ಎಡಗೈ) ಸಮುದಾಯದ ಪ್ರತಿನಿಧಿಯಾಗಿದ್ದಾರೆ. ಪಕ್ಷದ ಬಲವರ್ಧನೆಗಾಗಿ ಸದಾಶ್ರಮಿಸುತ್ತಿರುವ ನಾರಾಯಣಸ್ವಾಮಿ ಅವರು, ಈ ಹಿಂದೆ ರಾಜ್ಯದಲ್ಲಿ ಸಮಾಜಕಲ್ಯಾಣ ಸಚಿವರಾಗಿ ಸಮರ್ಥ ಆಡಳಿತ ನಡೆಸುವ ಮೂಲಕ, ದಲಿತ ಸಮುದಾಯದ ಧ್ವನಿಯಾಗಿದ್ದಾರೆ. ಜತೆಗೆ, ದಕ್ಷಿಣ ಭಾರತದಲ್ಲಿ ದಲಿತ(ಎಡಗೈ) ಸಮುದಾಯ ಬಿಜೆಪಿ ಬೆಂಬಲಿಲು ನಾರಾಯಣಸ್ವಾಮಿ ಅವರ ಸ್ಪೂರ್ತಿಯೇ ಕಾರಣ. ಹೀಗಾಗಿ, ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ರಾಜ್ಯದ ದಲಿತ ಸಮುದಾಯದ ನಾರಾಯಣಸ್ವಾಮಿ ಅವರನ್ನು ಪರಿಗಣಿಸುವ ಮೂಲಕ ಸಚಿವರನ್ನಾಗಿ ನೇಮಿಸುವಂತೆ ಅವರು ಒತ್ತಾಯಿಸಿದರು.