December 8, 2021

Vijayanews

#1 digital newspaper

ಬೈಕ್ ಅಪಘಾತದಲ್ಲಿ ಸವಾರನಿಗೆ ಗಂಭೀರ ಗಾಯ; ಮಾನವೀಯತೆ ಮೆರೆದ ಸಿಪಿಐ ಲಮಾಣಿ

ಬೈಕ್ ಅಪಘಾತದಲ್ಲಿ ಸವಾರನಿಗೆ ಗಂಭೀರ ಗಾಯ; ಮಾನವೀಯತೆ ಮೆರೆದ ಸಿಪಿಐ ಲಮಾಣಿ

ಶಿರಹಟ್ಟಿ: ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸವಾರನೊಬ್ಬ ರಸ್ತೆ ಪಕ್ಕದಪ್ಪದಲ್ಲಿ ಬಿದ್ದು ಒದ್ದಾಡುತ್ತಿದ್ದ, ಅದೇ ಮಾರ್ಗದಲ್ಲಿ ಹಾದುಹೋಗುತ್ತಿದ್ದ ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಅವರು ತಕ್ಷಣ ತಮ್ಮ ಜೀಪ್ ನಿಲ್ಲಿಸಿ, ಯುವಕನಿಗೆ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಮಾನವೀಯ ಕಳಕಳಿ ಮೆರೆದ ಘಟನೆ ತಾಲ್ಲೂಕಿನ ಗೊಜನೂರು-ಲಕ್ಷ್ಮೇಶ್ವರ ಮಧ್ಯೆ ಸೋಮವಾರ ನಡೆದಿದೆ.

ಗೊಜನೂರು- ಲಕ್ಷ್ಮೇಶ್ವರ ಮಾರ್ಗದ ಮೂಲಕ ಗದಗ ಜಿಲ್ಲಾಕೇಂದ್ರಕ್ಕೆ ಸಂಚರಿಸುತ್ತಿದ್ದ ಸಿಪಿಐ ವಿಕಾಸ್ ಲಮಾಣಿ ಅವರಿಗೆ ಅಪಘಾತದ ಸಂಭವಿಸಿ, ಗಾಯಗೊಂಡಿರುವ ಯುವಕನನ್ನು ನೋಡಿದ್ದಾರೆ. ತಕ್ಷಣ ಜೀಪ್ ನಿಲ್ಲಿಸಲು ಹೇಳಿದ ವಿಕಾಸ್ ಅವರು, ತಮ್ಮ ಜೀಪಿನಲ್ಲಿದ್ದ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿನ ಔಷಧಿಯಿಂದ ಪ್ರಥಮ ಚಿಕತ್ಸೆ ನೀಡಿದ್ದಾರೆ. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ, ಅಂಬುಲೆನ್ಸ್ ಗೆ ಫೋನ್ ಮಾಡಿದ್ದಾರೆ. ಬಳಿಕ,  ಅಂಬುಲೆನ್ಸ್ ಸ್ಥಳಕ್ಕೆ ಆಗಮಿಸುವವರೆಗೂ ಸ್ಥಳದಲ್ಲಿಯೇ ಇದ್ದು, ಅಂಬುಲೆನ್ಸ್ ಗೆ ಗಾಯಾಳುವನ್ನು ಸಾಗಿಸಿದ ಬಳಿಕ ತಮ್ಮ ಕೆಲಸಕ್ಕೆ ತೆರಳಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿರುವ ಯುವಕನನ್ನು ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.

ಸಿಪಿಐ ವಿಕಾಸ್ ಅವರ ಮಾನವೀಯತೆಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.